• mynuloveyou 6w

    ನಗರಿಗಳು...

    ಈ ಭಾವನೆಗಳು ಧೂಳು ಹಿಡಿದಿವೆಂದು ಅನಸಿದಾಗ ಶಹರದ ಮೇಲೆ ತುಂಬಾ ಕೋಪ.ಆದರೆ ಸಂಜೆಯು ಸರಿದು ರಾತ್ರಿಯಾದರೆ ಸಾಕು ಅದೇನೋ ನನಗೆ ತಿಳಿದಿಲ್ಲ ಈ ನಗರವು ತುಂಬಾ ಇಷ್ಟವಾಗುತ್ತದೆ.
    ಕೆಡುಕರು, ಒಳ್ಳೆಯವರು ಈ ಎರಡರ ಮಧ್ಯದಲ್ಲಿ ರಾತ್ರಿಗೆ ಕಾಣಿಸಿಕೊಳ್ಳುವ ಈ ನಗರದ ಪ್ರದೇಶಗಳ ಅದೆಲ್ಲರನ್ನು ದಿನಂಪ್ರತಿ ಸುಸ್ತಾಗಿಸಿ ನೆಮ್ಮದಿಯತ್ತ ತಂದು ನಿಲ್ಲಿಸುತ್ತದೆ. ಎಲ್ಲಿ ನೋಡಿದರು ಮನರಂಜನೆಯಾಗಿ ಬದಲಾಗುತ್ತದೆ. ಮಜಾ ಮಾಡುವರು ಹೆಚ್ಚಾಗಿ ಕಂಡರು ನೋವಿಗೆ ನರಳಿದ ಜನರು ಕಾಣೆಯಾದಂತೆ ಅಲ್ಲಲ್ಲಿ ಕಾಣುವರು ಅಥವಾ ಅವರುಗಳು ಅದು ದುಃಖದ ಮಡಿಲಲ್ಲಿ ಬದುಕುತ್ತಿರುವಂತೆ ಕಾಣವರು.
    ಮನೆ ತೊರೆದು ನೆನಪುಗಳನ್ನು ಮರೆತವರು ಹಾಗು ನೆನಪು ನೆನೆದು ಬಂದ ಗುರಿಗಾಗಿ ಬದುಕುತ ಸಪ್ಪೆ ನಗೆಯಲ್ಲೇ ಮನಸು ಗಟ್ಟಿಮಾಡಿಕೊಂಡವರು ಇವರೆಲ್ಲರೂ.
    ಇನ್ನೂ ನಗರದ ರಹಸ್ಯವು ತಿಳಿಯದು ತಿಳಿದಷ್ಟು ತಿಳಿದುಕೊಂಡವರಿಗೆ ಖುಷಿ ಮಾತ್ರ ನೀಡುವ ಹಾಗೆ ಅರಿಯಲಿ ಸಾಕು. ಅದಕ್ಕೆ ಶಹರಗಳು ಬಿಟ್ಟುಬಿಡದ ಮಾಯಾನಗರಿಯಂತೆ ಕಾಣಿಸಿಕೊಳ್ಳುವ ಕನಸಿನ ನಗರಿಗಳು...
    ©mynuloveyou