• gujjayyanakoppalanna 15w

    ￰ಆಗಾಗ ನಾನು ಮತ್ತು ಕೋಲಾರದ ಗೆಳೆಯ ಮತ್ತು ಸಹೋದ್ಯೋಗಿ ಶಿವಣ್ಣ ಫೋನಿನಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿರುತ್ತೇವೆ. ಹಾಗೆಯೇ ನಿನ್ನೆ ಅವರಿಗೆ ಫೋನ್ ಮಾಡಿ ಮಾತನಾಡಿಸಿದಾಗ ಅವರಲ್ಲಿ ಎಂದಿನ ಲವಲವಿಕೆ ಇರವಿಲ್ಲ. ಆಯಾಸ
    ಅನಾಯಾಸವಾಗಿ ಪ್ರಕಟವಾಗುತ್ತಿತ್ತು ಅವರ ದನಿಯಲ್ಲಿ. ವಿಚಾರಿಸಿದಾಗ ಅವರ ಅರೋಗ್ಯ ಹದಗೆಟ್ಟು ಎರಡು ದೊಡ್ಡ ಸರ್ಜರಿಗಳಾಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಶಿವಣ್ಣನವರೂ 60 plus. ನಾನೂ 60 plus.ಕಳೆದ
    ವರ್ಷ ನನಗೂ ಸರ್ಜರಿಯಾಗಿ
    ಚೇತರಿಸಿಕೊಂಡಿದ್ದೇನೆ.ಹಾಗಾಗಿ ಸರ್ಜರಿಯಾದವರ ಮನೋಭೂಮಿಕೆ ನನಗರ್ಥವಾಗುತ್ತದೆ. ಇಂದು ಬೆಳಿಗ್ಗೆ ಬೇಗ ಎದ್ದವನು ಕರ್ಮಾದಿಗಳನ್ನು ಮುಗಿಸಿ ನೇರ ಮೆಜೆಸ್ಟಿಕ್ ತಲುಪಿ ಕೋಲಾರದ
    ಬಸ್ ಹತ್ತಿದೆ. ಕೋಲಾರ ತಲುಪಿದಾಗ ಬಸ್ ಸ್ಟ್ಯಾಂಡಿನಲ್ಲಿ
    ಕಾದಿದ್ದ ಅವರ ಮಗ ಲೋಕೇಶ್
    ನನ್ನನ್ನು ಮನೆಗೆ ಕರೆದೊಯ್ದರು.
    ಶಿವಣ್ಣ ಕೊಂಚ ಕೃಶರಾಗಿದ್ದಾರೆ.
    ಆದರೆ ಗಟ್ಟಿ ಕುಳ. ನಿಧಾನವಾಗಿ
    ಓಡಾಡುತ್ತಾರೆ. ಒಂದಷ್ಟು ಸಮಯ ಅವರೊಡನೆ ಕಷ್ಟಸುಖ ವಿನಿಮಯ ಮಾಡಿಕೊಂಡೆ. ಅಷ್ಟರಲ್ಲಿ ತಿಂಡಿ ಕಾಫಿ ಬಂತು. ಅವುಗಳನ್ನು
    ಮುಗಿಸುವಷ್ಟರಲ್ಲಿ ಬಂಗಾರಪೇಟೆಯ ಗೆಳೆಯ ರಮೇಶರಿಂದ ಕರೆ ಬಂತು.
    ಶಿವಣ್ಣ ಮತ್ತವರ ಕುಟುಂಬದವರಿಗೆ ವಂದಿಸಿ ಬೇಗ ಚೇತರಿಸಿಕೊಳ್ಳಿರೆಂದು ಹಾರೈಸಿ ಮನೆಯಿಂದ ಹೊರಬಂದೆ. ಲೋಕೇಶ್ ಡೂಮ್ ಲೈಟ್ ವೃತ್ತದವರೆಗೆ
    ಡ್ರಾಪ್ ಕೊಟ್ಟು ಬಂಗಾರ ಪೇಟೆಯ ಬಸ್ಸು ಹತ್ತಿಸಿದರು.
    ಬಸ್ಸಿನಲ್ಲಿ ಹೊಟ್ಟೆ ಬಿರಿಯುವಷ್ಟು
    ತೆಲುಗು ಬಿಡ್ಡರು ತುಂಬಿದ್ದರು.
    ಅಲ್ಲಿದ್ದ ಹಳೆಯ ಟಿವಿಯಲ್ಲಿ
    ನಂದಮೂರಿ ಬಾಲಯ್ಯನ ತೆಲುಗು ಸಿನಿಮಾದ ವಿಡಿಯೋ
    ಹಾಕಿ volume ಹೆಚ್ಚಿಸಿದ್ದರು.
    ಕಿವಿ ಗಡಚಿಕ್ಕುತ್ತಿತ್ತು. ಬಸ್ಸು
    ಬಂಗಾರಪೇಟೆ ಕಡೆ ಓಡುತ್ತಿತ್ತು.
    ©gujjayyanakoppalanna