• mayavi 3w

    ನನಗಾಗಿ

    ನಾನೂ ಕೂಡ ಅಷ್ಟೇ, ಹೀಗಿರಲಿಲ್ಲ
    ಒಂದು ಮನದ ಹಿಂದೆ,
    ಒಂದು ಪಾತ್ರಕ್ಕಾಗಿ ಬಹಳಷ್ಷು ಓಡಾಡಿದೆ.
    ಮನ ರೋಧಿಸಿದರೂ ಲೆಕ್ಕಿಸದೆ ಆ ಮನಕ್ಕಾಗಿ ಪರದಾಡಿದೆ.....
    ಬದುಕು ಪ್ರತಿಯೊಂದು ಕ್ಷಣವೂ ನಮಗೆ ಅದೇನೋ ಹೇಳ ಬಯಸುತ್ತೆ ,
    ಕೇಳಲು ಕಿವಿಯಿರಬೇಕು ಅಷ್ಟೇ!!
    ಆದರೆ ಅಂದು ಬದುಕಿನ ದನಿಗೆ ಕಿವಿ ಆಲಿಸಲೇ ಇಲ್ಲ.
    ಮುಂದೆ ಅದು ನನಗೆ ಪಾಠವಾಗಬಹುದು ಎಂದು ನಾ ಊಹಿಸಲೂ ಇರಲಿಲ್ಲ....
    ಹಿಂದೆ ಬಹಳಷ್ಟು ಬಾರಿ ನಾನು ತನ್ನತನವನ್ನು ಮರೆತಿದ್ದೆ.....ಅವಳು ಹೇಳಿದ ಮಾತು ಆಗಾಗ ನೆನಪಾಗುತ್ತಿತ್ತು
    "ನೀನು ಮೊದಲು ಸ್ವಾಭಿಮಾನಿಯಾಗು" ಎಂದು.
    ನನ್ನ ಪಯಣದ ಹಿಂದಿನ ಪುಟಗಳನ್ನು ನಾ ನೋಡಿದಾಗ ಮನ ನಗುತ್ತದೆ....
    ಇಂದಿನ ಬದಲಾವಣೆಗೆ ಅಂದು ಎಲ್ಲೋ ನಾಂದಿಯನ್ನು ಹಾಡಿತು ಎಂದೆನಿಸುತ್ತದೆ.

    ಇಂದು ನಾ ನನ್ನನ್ನು ಬಹಳಷ್ಟು ಪ್ರೀತಿಸುತ್ತೇನೆ.
    ಪ್ರೀತಿಸಿ ನನ್ನ ಪ್ರೇರೇಪಿಸುವ ಪಾತ್ರಗಳನ್ನು ಬಿಗಿದಪ್ಪಿ ಹಿಡಿಯುತ್ತೇನೆ....
    ಒಂದು ಮನದ ಹಿಂದೆ ಓಡುವ ಚಟವ ನಾ ಬಿಟ್ಟಿದ್ದೇನೆ....

    ನಾನು ಇಂದು ನಾನಾಗುತ್ತಿದ್ದೇನೆ
    ನಾನು ನನಗಾಗಿ ಉಸುರುತ್ತಿದ್ದೇನೆ
    ©mayavi