• bprateethreddy 16w

    ನೋವು

    ಅಕ್ಷಿಯಾ ಅಂಚಿನಲಿ ಹರಿದ ಕಣ್ಣಿನ ನೀರು
    ಪಕ್ಷಿಯಂತ್ ಹಾರಲು ಬಿಡದು ನೋವಿನ ಬೇರು
    ಒಂಟಿಯಾಗಿಸಿದ ಕಡಲಲ್ಲಿ ನನ್ನ ಆ ದೇವರು
    ಜೋರಾಗಿ ಚೀರಿದರು ಇಲ್ಲ ಕೇಳಲು ಯಾರು

    ಹುಟ್ಟಿದ ಹೊಸತಲ್ಲಿ ತಾಯಿಯ ಮಡಿಲಲ್ಲಿ ಜನಿಸಿತು ಈ ನನ್ನ ನೋವು
    ಅತ್ತರೆ ಎತ್ತಿಕೊಳ್ಳುವವರಿಲ್ಲ ಹಸಿದರೆ ಹಾಲುಣಿಸುವವರಿಲ್ಲ ಈಗತಿಗಿಳಿಸಿತು ಆಕೆ ಸಾವು
    ಜೀವನದ ಹೊಸ್ತಿಲಲ್ಲಿ ಮತ್ತಷ್ಟು ಕುಗ್ಗುವಂತೆ ಮಾಡಿಹುದು ಈ ನೋವಿನ ಕಾವು
    ನನ್ನ ಯುಗಾದಿಯಲಿ ನಾ ಬರೀ ಉಂಡದ್ದು ಕಹಿಯ ಬೇವು

    ತಾಯಿ ಇಲ್ಲದ ನಾ ಅಂದುಕೊಂಡೆ ನನಗೆ ತಂದೆಯೇ ಎಲ್ಲ
    ಸತಿ ಕಳೆದುಕೊಂಡ ಆತ ಬದಲಾಗ ತೊಡಗಿದ ಮೆಲ್ಲ
    ರಾತ್ರಿಯಾದರೆ ಸಾಕು ತೂಗಾಡಿ ಬರುತಿದ್ದ ಯಾಕೋ ಗೊತ್ತಿಲ್ಲ!
    ಕಡೆಗೊಂದು ದಿನ ಆತ ನಾಲ್ಕುಜನರ ಹೆಗಲೇರಿದ ಹೊರತು ನಾ ಆತನ ಹೆಗಲೇರಲಿಲ್ಲ..

    ಕಾಪಾಡು ದೇವರೇ ಈ ಕಷ್ಟ ಸಾಗರದಿಂದ ಎನ್ನ
    ನೋವು ಮಾಡಿರುವ ಗಾಯ ಚುಚ್ಚುತಿಹುದೆನ್ನ ಬೆನ್ನ
    ಆ ಅಸ್ತ್ರ ನನ್ನ ಪೂರ್ಣ ಘಾಸಿಗೊಳಿಸುವ ಮುನ್ನ
    ಸಾಕಿನ್ನು ದೇವರೇ ಕರೆದುಬಿಡು ನನ್ನ!!!!
    ©bprateethreddy