• keshavshetty 15w

    ನನ್ನೂರು

    ನಮ್ಮೂರ ಸೊಬಗು...
    ಜುಯ್ ಗುಟ್ಟುವ ಜೀರುಂಡೆ ಗಳು..
    ಸುಯ್ ಎಂದು ಗಾಳಿ ಬೀಸುವ ಗಾಳಿ ಮರಗಳು...
    ತುಂಬಿ ಹರಿಯುತ್ತಿರುವ ಹೊಳೆ ಕೆರೆಗಳು.
    ಎಲ್ಲೆಲ್ಲಿ ನೋಡಿದರೂ ಹಸಿರು ಮರ ಗಿಡಗಳು
    ಸಂಜೆ ಯಾಗುತ್ತಲೇ ಮನೆಗೆ ಮರಳುತ್ತಿರುವ ದನ ಕರುಗಳು..
    ಸಂಜೆ ಶಾಲೆ ಮುಗಿಸಿ ಬರುವ ಮುದ್ದು ಮಕ್ಕಳುಗಳು...‍‍‍
    ರಾತ್ರಿ ಯಾಗುತ್ತಲೇ ಭಯ ಬೀಳಿಸುವ ಆನೆಗಳು.
    ಕಾರ್ತಿಕ ಮಾಸದಲ್ಲಿ ಚೆನ್ನಕೇಶವ ದೇವಾಲಯ ಸೊಬಗು ಹಾಗೂ ದೀಪಾಲಂಕಾರಗಳು...
    ಸಾಲುವುದಿಲ್ಲ ಪದಗಳು ನಮ್ಮೂರನ್ನು ಬಣ್ಣಿಸಲು
    ಒಮ್ಮೆಯಾದರೂ ಬನ್ನಿ ನಿಮಗೆಲ್ಲರಿಗೂ ಸ್ವಾಗತಗಳು....
    ಸ್ವರ್ಗಕ್ಕೆ ಇನ್ನೊಂದು ಹೆಸರೇ ನಮ್ಮೂರು..
    ©keshavshetty