• gujjayyanakoppalanna 15w

    ಮೋದಿ, ಸಿದ್ದು , ಜಿ ಟಿ ಡಿ, ಶ್ರೀನಿವಾಸ ಪ್ರಸಾದ್ ,
    ವರುಣ, ಚಾಮುಂಡೇಶ್ವರಿ , ಯಡಿಯೂರಪ್ಪ ಎಲ್ಲರೂ
    ನಮ್ಮ ಚರ್ಚೆಯ ವಸ್ತುವಾದರು. ಅಷ್ಟರಲ್ಲಾಗಲೇ
    ಸಂಜೆ ಐದು ಘಂಟೆಯಾಗಿತ್ತು. ಒಂದು ರೌಂಡ್ ಟೀ
    ಕುಡಿದು ಹೊಟ್ಟೆ ತುಂಬಾ ಅಕ್ಕರೆಯಿಂದ ಉಣಬಡಿಸಿದ
    ಆ ತಾಯಿಗೆ ನಮಿಸಿ ಮೈಸೂರಿನ ನನ್ನ ಮನೆಗೆ ಬರುವಂತೆ ಆಹ್ವಾನಿಸಿ ನಾನೂ ನಾಯ್ಕರೂ
    ಬಸ್ ಸ್ಟ್ಯಾಂಡಿಗೆ ಬಂದೆವು. ಬೆಟ್ಟದಿಂದ ಬಂದಿದ್ದ
    ಮಹದೇಶ್ವರ ಬಸ್ ಸಿದ್ದವಾಗಿ ನಿಂತಿತ್ತು. ಬಸ್ಸು
    ಮೈಸೂರಿನತ್ತ ಹೊರಟಿತು. ಕಿಟಕಿಯಿಂದ ಬೀಸಿ ಬಂದ ಗಾಳಿ ನನ್ನನ್ನು ಸಣ್ಣ ನಿದ್ರೆಗೆ ಜಾರಿಸಿಬಿಟ್ಟಿತು. ಕಣ್ಣು
    ಬಿಟ್ಟಾಗ ಮೈಸೂರಿನ RMC ಬಸ್ ಸ್ಟ್ಯಾಂಡಿನಲ್ಲಿದ್ದೆ .
    ಸಹ ಪ್ರಯಾಣಿಕರು ಇಳಿಯುತ್ತಿದ್ದರು. ಬಸ್ಸಿಳಿದವನೇ
    ಸಯ್ಯಾಜಿ ರಾವ್ ರಸ್ತೆಯತ್ತ ಹೆಜ್ಜೆ ಹಾಕಿದೆ. ಹೊಸ
    ಅನುಭವವೊಂದನ್ನು ದಕ್ಕಿಸಿಕೊಂಡ ಪ್ರಫುಲ್ಲತೆ
    ನನ್ನ ಭಾವ ಕೋಶದಲ್ಲಿ ಮನೆಮಾಡಿತ್ತು. ಬದುಕಿನ
    ಏಕತಾನತೆ ಯಾಂತ್ರಿಕತೆಗಳನ್ನು ಹೋಗಲಾಡಿಸಲು
    ನಾನು ಆಗಾಗ ಹೀಗೆ ಪರಿವ್ರಾಜಕನಂತೆ ಸುತ್ತುತ್ತಿರುತ್ತೇನೆ....
    ©gujjayyanakoppalanna