• sandeepnaguve 15w

  ನೀನು

  ನನ್ನ ಮನಕೆ ಜೀವ ತುಂಬಿದ
  ನನ್ನುಸಿರು ನೀನು
  ನನ್ನ ಕಂಗಳಿಗೆ ದಾರಿ ತೋರಿದ
  ಹೊಂಬೆಳಕು ನೀನು....
  ಮುದುಡಿದ್ದ ನನ್ನ ಮನವ ಅರಳಿಸಿದ
  ನನ್ನ ಚಿಲುಮೆಯು ನೀನು
  ನನ್ನ ಮುಖದಲಿ ನಗು ತರಿಸಿದ
  ನನ್ನ ನಲ್ಮೆಯು ನೀನು....!
  ಕಾಣುವ ಆಸೆ ನಿನ್ನ ಮುದ್ದು ಮುಖವನ್ನೊಮ್ಮೆ!
  ಕಣ್ಣು ಮಿಟುಕಿಸದೆ ನೋಡುವ ಆಸೆ
  ನಿನ್ನ ಕಂಗಳನ್ನೊಮ್ಮೆ....
  ನಡೆಯಲಾಸೆ ನಿನ್ನ ಕೈಗಳ ಹಿಡಿದು
  ನಿನ್ನ ಜೊತೆಯಲ್ಲೊಮ್ಮೆ....!
  ತ್ವರೆಮಾಡಿ ಸ್ವೀಕರಿಸು ನನ್ನ ಬೇಡಿಕೆಯನ್ನೊಮ್ಮೆ....
  ದಯಮಾಡಿ ಕರುಣಿಸು ನನ್ನ ಬಯಕೆಯನ್ನೊಮ್ಮೆ....!

  ©sandeepnaguve