• mayavi 14w

    #ಮಾಯಾವಿ

    Read More

    ಅನರ್ಥ

    ಅತ್ತ,
    ಅಲೆಗಳು ಅಬ್ಬರಿಸುತ್ತಿದ್ದವು!!
    ಅದು ಎಂದಿನಂತಿನ ಅಬ್ಬರವೇ ಆಗಿತ್ತು , ಹೊಸತೇನಲ್ಲ!!
    ಬಾನು ಸುಂದರತೆಯ ತವರಾಗಿತ್ತು,
    ಪುಕಗಳು ಅತ್ತಿಂದ ಇತ್ತ ಹಾರಾಡುತ್ತಾ ಸಮಯ ಕಳೆಯುತ್ತಿತ್ತು!!

    ಇತ್ತ,
    ಮನದ ಅಲೆಗಳು ಅಬ್ಬರಿಸುತ್ತಿದ್ದವು!!
    ಅದು ಎಂದಿನಂತಿರಲಿಲ್ಲ, ಹೊಸತಾದ ಅನುಭವ ಅದಾಗಿತ್ತು!!
    ತನ್ನ ಅಸ್ತಿತ್ವದ ಗೋಜಿಗೆ ತಲೆ ಹಾಳಾಗಿತ್ತು,
    ಪಯಣದಲ್ಲಿ ಪಾತ್ರದ ಏರು~ಪೇರು,
    ಹೀಗೆಯೇ ಪಯಣ ಸಾಗಿತ್ತು!!
    ©mayavi