• kanasu 36w

  ಎಲೆಮೇಲಿನ
  ಮಳೆಹನಿಯಲ್ಲಿ ಪ್ರಕೃತಿಯ ಬಿಂಬ ನೋಡಿ
  ಇಡೀ ಜಗತ್ತನ್ನೇ ನೋಡಿದೆನೆಂದು ಇರುವೆ
  ಕುಣಿದು ಕುಪ್ಪಳಿಸುತ್ತಿತ್ತು

  ಮರುಕ್ಷಣ ಬಂದ ಗಾಳಿ
  ಹನಿಯನ್ನ ಕದ್ದೊಯ್ದರೆ
  ತನ್ನ ಜಗತ್ತನ್ನೇ ಕಸಿದಷ್ಟು ಸಂಕಟದಿಂದ
  ಚಡಪಡಿಸುತಿತ್ತು ,

  ನಾವೂ ಹಾಗೇ ಅಲ್ಲವೇ!!

  ಎಲ್ಲ ನಮ್ಮವರೇ ನಮ್ಮದೇ
  ಅಂದುಕೊಂಡಾಗಲೇ

  ಪಕ್ಕಾ ಕಲ್ಪನಾಲೋಕದಿಂದೆಂಬಂತೆ
  ಬಡಿದೆಬ್ಬಿಸುತ್ತಾರೆ..
  ಖುಷಿಯೂ ನಮ್ಮದೇ
  ಸಂಕಟವೂ!!

  ©kanasu