• ruhi21 31w

    ನಾ ಆಸೀಫಾ...

    ಅಮ್ಮನಿಗೆ ಟಾಟಾ ಎಂದು
    ಅಪ್ಪನಿಗೆ ಈಗ ಬರುವೆ ಎಂದು
    ಮನೆಯ ತಿರುಗಿ ನೋಡಿಕೊಂಡು
    ಎರಡು ಹೆಜ್ಜ್ ಮುಂದೆ ಅಷ್ಟೇ
    ನಗುತ್ತಾ ಮನೆಯಿಂದ ಹೊರಗೆ ಹೋದದಷ್ಟೇ

    ಹದಿಹರೆಯದ ನನ್ನ ಮನಸ್ಸು
    ಕಣ್ಣಲ್ಲಿ ಇತ್ತು ತುಂಬಾ ಕನಸ್ಸು
    ಧರ್ಮದ ಅರ್ಥ ತಿಳಿ ಇಲ್ಲ ನನ್ನ
    ನಡೆಯುವ ಈ ಘಟನೆಯ ಮುನ್ನ

    ನನ್ನ ಮೇಲೆಯೂ ಇತ್ತು ಹತ್ತು ಕಣ್ಣು
    ಕಾಡಿನದ್ದಲ್ಲ...ಸಮಾಜದ ಪ್ರಾಣಿಯರದು
    ಹೆಜ್ಜೆ ಮುಂದೆ ನನ್ನ ಹೋಗುತಿತ್ತು
    ಒಮ್ಮೆ ಕಣ್ಣಿಗೆ ಕಪ್ಪು ಮೋಡ ಬಂತು
    ಅಮ್ಮ ಎಂದು ಒಮ್ಮೆ ಕೂಗಿ ಬಿಟ್ಟೆ
    ಶರೀರ ಮೆಲ್ಲನೆ ನಮ್ನ್ ವಾಯಿತು
    ಏನೋ ನನ್ನ ಚುಚ್ಚಿದಂತಾಯಿತು
    ನಶೆಯ ನಿದ್ರೆಗೆ ಕರೆಯಾಯಿತು

    ಕಣ್ಣು ಒಂದೇ ಮುಚ್ಚಿ ಇತ್ತು
    ಕಿವಿಗೆ ಎಲ್ಲಾ ಕೇಳುತಿತ್ತು
    ಪಾಪಿಗಳ ಕೈಯಲ್ಲಿ ನನ್ನ ದೇಹವಿತ್ತು
    ನನ್ನ ಏನು ಅರ್ಥವಾಗಲಿಲ್ಲ
    ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ
    ಚಂಡಿನಂತೆ ನನ್ನ ಎತ್ತುಕೊಂಡು
    ಆಟತೊಡಗಿದರು ನನ್ನ ಆಟಸಾಮನವೆಂದು
    ಹೃದಯ ನನ್ನ ಕೂಗುತ್ತಿತ್ತು
    ಶರೀರ ತುಂಬಾ ನೋವುತ್ತಿತ್ತು
    ಏನೂ ಹೇಗೆ ನನ್ನ ಮುಟ್ಟುತ್ತಿದ್ದರು
    ಹಿಂಸೆ ಮಾಡಿ ಮಾಡಿ ನನ್ನ ಕಚ್ಚುತ್ತಿದರು
    ಉಸಿರು ನನ್ನ ನಿಂತರೂ
    ಪಾಪಿಗಳ ಆಟ ನಿಲ್ಲಲಿಲ್ಲ
    ಹರಿದು ನನ್ನ ಕಚ್ಚಿ ಬಿಟ್ಟರು
    ಕೊಚ್ಚಿ ಕೊಚ್ಚಿ ನನ್ನ ತಿಂದು ಬಿಟ್ಟರು
    ನನಗೆ ಏನು ಅಂತ ಅರಿವಿಲ್ಲದ ಆಟವಿದು
    ಯಾವತ್ತು ಸಹಿಸದ ಕಾಟವಿದು
    ನಾ ಮರೆಯಲಾಗದ ಶಾಪವಿದು
    ಮುಳ್ಳು ಚುಚ್ಚಿದರು, ಪ್ರಾಣಿ ಕಚ್ಚಿದರು,ಆಟ ಆಡಿ ಬಿದ್ದರು
    ಎಂದು ಇಂತ ನೋವು ಗಾಯಗರಿರಲಿಲ್ಲ
    ನನ್ನ ಬದುಕಿಗೆ ಈ ಅಂತ್ಯ ಗೊತ್ತಿರಲಿಲ್ಲ
    ಕಾಡು ಪ್ರಾಣಿಗೆ ಹೆದರದ ನಾನು
    ಮನುಷ್ಯ ಪ್ರಾಣಿಗೆ ಹೆದರಿ ಬಿಟ್ಟೆ
    ಈ ಪಾಪಿಗಳ ಶಕ್ತಿ ಮುಂದೆ
    ನಾ ಸೋತು ಬಿಟ್ಟೆ..
    ಆದರೆ....
    ಭಾರತದಲ್ಲಿ ಜೀವಿಸುವ ಆಶಿಫಾಗಳೇ...
    ನೀವು ಸೋಲದಿರಿ..!!!
    ನ್ಯಾಯಕ್ಕಾಗಿ ಹೋರಾಡಿ ನನ್ನ ನ್ಯಾಯ ಕೊಡಿ!!!
    ನ್ಯಾಯ ಕೊಡಿ!!ನ್ಯಾಯ ಕೊಡಿ!! ನ್ಯಾಯ ಕೊಡಿ!!!
    ನಿಮ್ಮ ಆಸೀಫಾ