• goudab 6w

    ವೈದ್ಯೋ ನಮಃ...

    ಧರಿಸಿರುವ ಶ್ವೇತ ವಸ್ತ್ರ
    ಮನವಷ್ಟೇ ಸ್ವಚ್ಛ ಶುಭ್ರ
    ದೇವನೊಮ್ಮೆ‌ ಇತ್ತ ಪ್ರಾಣವ
    ಕಾವ ಕೊನೆತನಕ ಹರಣವ
    ಮಗುವ ನೋಡುವ ಮುದ್ದಿನಲಿ
    ವೃದ್ಧರ ಆರೈಕೆ ಸಂಯಮದಲಿ
    ಅಸಹ್ಯಪಡದೆ ಸಹ್ಯದಲಿ ಕಾಂಬ
    ನಿಸ್ಸಂಕೋಚ ಕರುಣೆ‌ಕಣ್ಣ ತುಂಬ
    ಸೇವಾ ಭಾವದ ಉತ್ತುಮಗ ಶಿಖರ
    ನಿಸ್ವಾರ್ಥ ಮನಕೆ ಮನುಜ ಮುಕುರ
    ಕಲಿಯುಗದ ಧನ್ವಂತರಿ ವೈದ್ಯನ
    ನಾರಾಯಣನೆಂದು ಗೈವೆ ನಮನ

    ಭವಾನಿ ಗೌಡ