• gujjayyanakoppalanna 23w

    ಅದೇಕೋ ಇದ್ದಕ್ಕಿದ್ದಂತೆ ನನ್ನ ನಲ್ಮೆಯ ಗೆಳೆಯ
    ನಿವೃತ್ತ ಬ್ಯಾಂಕ್ ಅಧಿಕಾರಿ ಮಹಾದೇವ ನಾಯ್ಕರನ್ನು
    ನೋಡಬೇಕೆನಿಸಿತು. ಇಂದು ಬೆಳಿಗ್ಗೆ ಎದ್ದವನೇ ನಿತ್ಯ
    ಕರ್ಮಾದಿಗಳನ್ನು ಮುಗಿಸಿ ಹಾರ್ಡಿಂಜ್ ಸರ್ಕಲಿನಲ್ಲಿ
    ಟಿ ನರಸೀಪುರದ ಬಸ್ಸನ್ನು ಹತ್ತಿದೆ. ಹೊರಗೆ ರಣರಣ
    ಬಿಸಿಲು. ಸೂರ್ಯದೇವ ಉಗ್ರರೂಪಿಯಾಗಿದ್ದ.ಸೆಕೆ
    ಸೆಕೆ.ಬೆವರು ಬೆವರು. ಟಿ ನರಸಿಪುರ ತಲುಪಿದಾಗ
    ಮಧ್ಯಾಹ್ನ ಒಂದು ಘಂಟೆ. ಸುಡು ಬಿಸಿಲು .ಧಗೆ
    ಧಗೆ. ಬಸ್ ಸ್ಟ್ಯಾಂಡಿನಲ್ಲಿ ಕಾದಿದ್ದ ನಾಯ್ಕರು ನನ್ನನ್ನು
    ಮನೆಗೆ ಕರೆದೊಯ್ದರು. ಈ ನಾಯ್ಕರೋ ಚಂದಮಾಮದಲ್ಲಿ ಬರುವ ಪರೋಪಕಾರಿ ಪಾಪಣ್ಣನಂಥವರು. ಯಾರಿಗಾದರೂ ಸಹಾಯ
    ಮಾಡಬೇಕೆಂದರೆ ಮಾಡುವ ಕೆಲಸವನ್ನು ಬಿಟ್ಟು
    ಟೊಂಕ ಕಟ್ಟಿ ನಿಂತುಬಿಡುತ್ತಾರೆ. ಅವರ ಶ್ರೀಮತಿ
    ಅಕ್ಕರೆಯಿಂದ ತಂದುಕೊಟ್ಟ ನಿಂಬೆ ಪಾನಕ ಕುಡಿದಾಗ
    ಹೊಟ್ಟೆ ಕೊಂಚ ತಂಪಾಯ್ತು. ಒಂದಷ್ಟು ಸಮಯ
    ಲೋಕಾಭಿರಾಮವಾಗಿ ಹರಟಿದೆವು. ಅಷ್ಟರಲ್ಲಿ
    ಊಟಕ್ಕೆ ಕರೆ. ಆಕೆ ಅಣ್ಣಪೂರ್ಣೇಶ್ವರಿ. ಪುಷ್ಕಳ
    ಸಿಹಿ ಭೋಜನ ತಯಾರಿಸಿದ್ದರು. ಊಟದ ನಂತರ
    ದೇಗುಲಗಳಿಗೆ ಹೋಗೋಣವೆಂದರೆ ನೆತ್ತಿ ಸಿಡಿದು
    ಹೋಗುವಂಥ ಸುಡು ಬಿಸಿಲಿನ ಝಳ. ಟಿ ನರಸಿಪುರಕ್ಕೆ ಕೂಗಳತೆ ದೂರದಲ್ಲಿ ಅಪರೂಪವೆನಿಸುವ ಕುಬೇರನ ದೇವಸ್ಥಾನವಿದೆ.
    ಈ ಸಾರಿ ಅಲ್ಲಿಗೂ ಹೋಗಲಾಗಲಿಲ್ಲ. ಬಿಸಿಲಿನ
    ಬೇಗೆ ಎಲ್ಲರನ್ನೂ ಹೈರಾಣಾಗಿಸುತ್ತಿದೆ. ಮತ್ತೆ
    ಒಂದಷ್ಟು ಹರಟಿದೆವು.
    ----- ಸ ಶೇ ಷ ----
    ©gujjayyanakoppalanna