• veekshishetty 23w

    ನಾ ಕಂಡ ಮೊದಲ ಕನಸ್ಸು
    ಅದಾಯ್ತು ನನ್ನ ಕೊನೆಯ ಮನಸ್ಸು
    ಅರಿಯದೆ ಹೋದ ಈ ಜೀವ
    ಮತ್ತೆ ಮರುಳಿ ಬಂದ ಭಾವ

    ಅದೊಂದು ವಸಂತ ಋತುಮಾನ
    ಮೊದಲ ನಗೆಯಲ್ಲೇ ನನ್ನ ಕವನ
    ಆ ಹಸನ್ಮುಖವೇ ನನ್ನ ಜೀವನ
    ಮನದಲ್ಲಿ ಮೂಡಿತು ಚೇತನ

    ಅನಂತವಾದ ಈ ಪ್ರೀತಿಯಲಿ
    ಶಿಸ್ತನ್ನು ಮರೆಯಿತು ರೀತಿಯಲಿ
    ಅಂತರಾಳದ ಭಾವ
    ಅದೊಂದು ರೀತಿಯ ಹವಾ

    ಸಂಪದ್ಭರಿತವಾದ ನಮ್ಮಿ ಸಂಬಂಧ
    ಎಂದಾಗಬಾರದು ಅಸಂಬದ್ಧ
    ಸಣ್ಣ ಪುಟ್ಟ ಮನಸ್ಥಾಪ
    ಅದೇ ಜೀವನದ ತಾಪ

    ತಪ್ಪಿ ಹೋದ ಆತ್ಮಸ್ಥೆರ್ಯ
    ಕಳೆದು ಹೋಯಿತು ನನ್ನೀ ಧೈರ್ಯ
    ಜಾರಿ ಬಂದಿತು ಕಂಬನಿ
    ಕರುಣಾಳು ಬೇಗ ಬಾ ನೀ

    ©veekshishetty