• gujjayyanakoppalanna 24w

    ಇಂದು ಬೆಳಿಗ್ಗೆ ಮ್ಸಜೆಸ್ಟಿಕ್ನಿಂದ 114 ಸಿ ಬಸ್ ಹಿಡಿದು ಸುಲ್ತಾನಪಾಳ್ಯಕ್ಕೆ ಹೊರಟೆ..ಬಸ್ ಸ್ಟ್ಯಾಂಡಿನಲ್ಲಿ ಕಾದಿದ್ದ ಗೆಳೆಯ ಹರಿಹರನ್ ಕಕ್ಕುಲತೆಯಿಂದ ಬರಮಾಡಿಕೊಂಡು ಮನೆಗೆ
    ಕರೆದೊಯ್ದರು.ಪ್ರೀತಿಯಿಂದ ಸ್ವಾಗತಿಸಿದ ಅವರ ಶ್ರೀಮತಿ ಬಿಸಿ ಬಿಸಿ ಕಾಫಿ ನೀಡಿ ಉಪಚರಿಸಿದರು.New India ದ ಗತ ವೈಭವದ ದಿನಗಳ ಬಗ್ಗೆ
    ಒಂದಷ್ಟು ಹರಟಿದೆವು.ನಂತರ
    ಸನಿಹದಲ್ಲೇ ಇರುವ S Nagaraj (ಪರಕಲ ನಾಗಣ್ಣ )
    ಅವರ ಮನೆಗೆ ಹೋದೆವು. ನಾಗಣ್ಣ ಇನ್ನೂ ಹಾಗೆಯೇ ಇದ್ದಾರೆ. ತಲೆಗೂದಲಿಗೆ ಒಂದು
    ರೌಂಡ್ ಕಪ್ಪು ಬಣ್ಣ ಹಚ್ಚಿಬಿಟ್ಟರೆ
    ಯುವಕನಂತೆ ಕಾಣುತ್ತಾರೆ. ಈ
    ಮನುಷ್ಯ ಅದ್ಯಾವ ನಕ್ಷತ್ರದಲ್ಲಿ
    ಹುಟ್ಟಿದ್ದಾರೋ ಗೊತ್ತಿಲ್ಲ.ಅಲ್ಲೂ
    ಕಾಫಿ ಬಿಸ್ಕೆಟ್ ಸೇವಿಸಿದೆವು.
    ಸುಮಾರು 3 ಘಂಟೆಗಳ ನಿರಂತರ ಹರಟೆ. ಈ ಹರಿಹರನ್ ಅಪ್ರತಿಮ ಪ್ರತಿಭಾವಂತ. ಈತನೊಳಗೊಬ್ಬ ಕಲಾವಿದ ಇದ್ದಾನೆ. ಒಳ್ಳೆಯ ಗಾಯಕ ಮತ್ತು ಮಿಮಿಕ್ರಿ ಕಲಾವಿದ .
    ಇವರ ಮಗ ಅರವಿಂದ್ ಒಂದು
    ಕನ್ನಡ ಚಿತ್ರ ಮತ್ತು ಎರಡು ಕನ್ನಡ ಟಿವಿ ಧಾರಾವಾಹಿಗಳಲ್ಲಿ
    ನಟಿಸಿದ್ದಾರೆ. ಹರಿಹರನ್ ಅವರದು ಆಕರ್ಷಕ body language. ಬದ್ರುನ್ನಿಸ್ಸ ಬೇಗಮ್ ಮತ್ತು ಕೋದಂಡ
    ಇಬ್ಬರನ್ನು ಅನುಕರಣೆ ಮಾಡಿ ಮಾತನಾಡಿದರು. ನಂದಲಾಲ್
    ಅವರಂತೆ ನಡೆದಾಡಿ ನಗಿಸಿದರು .ನಿವೃತ್ತರು ಮಾತಿಗೆ
    ಕುಳಿತರೆ ಕೊನೆ ಎಲ್ಲಿ ? ಸುಮಾರು 4 ಘಂಟೆಗಳ ತನಕ
    ಹರಟಿ ಅವರಿಂದ ಬೀಳ್ಕೊಂಡು
    ನನ್ನ ಗೋಕುಲಂ ಮನೆಯತ್ತ
    ಮುಖ ಮಾಡಿದೆ. ನಾಗಣ್ಣ ಇನ್ನೊಮ್ಮೆ ಭೇಟಿಯಾಗೋಣ
    ಎನ್ನುವಂತೆ " ಸನ್ನೆ " ಮಾಡಿದರು. ಬಹುಶಃ "ಗುಂಡು"
    ಹಾಕಲು ಆಮಂತ್ರಣ ಇರಬೇಕು . ಈ ಬಡಾವಣೆಯಲ್ಲಿಯೇ S P Pillay ಮತ್ತು S M Diwakar
    ಇದ್ದಾರೆ. ಇಷ್ಟರಲ್ಲೆ ಅವರನ್ನೂ
    ಭೇಟಿಮಾಡುತ್ತೇನೆ..
    ©gujjayyanakoppalanna