• kavyarsmiley 24w

  ಆಸೆಗಳ ಬೆನ್ನೇರಿ

  ಚಿಲಿಪಿಲಿ ಹಕ್ಕಿಗಳ ಕಲರವ ಕಲಿಯುವ ಆಸೆ...
  ಗಿಳಿಗಳಿಗೂ ಒಮ್ಮೆ ಮಾತು ಕಲಿಸುವ ಆಸೆ...
  ಬಾನಂಚಿನ ಕಾಮನಬಿಲ್ಲಿನಲಿ ಜಾರುವ ಆಸೆ...
  ಮಿನುಗುವ ನಕ್ಷತ್ರಗಳ ಸ್ಪಷಿ೯ಸುವ ಆಸೆ...
  ಸಾಗರದ ಅಲೆಗಳಲಿ ಮೀಯುವ ಆಸೆ...
  ನಾಚುತ ಮುಳುಗುವ ಸೂಯ೯ನ ಸವಿಯುವ ಆಸೆ...
  ಬೆಳದಿಂಗಳ ಚಂದ್ರನ ತಂಪಲಿ ನಲಿಯುವ ಆಸೆ...
  ಜಿನು ಜಿನು ಜಿನುಗುವ ಝರಿಯಲಿ ಭೋಗ೯ರೆಯುವ ಆಸೆ...
  ತುಂತುರು ಮಳೆಯ ಹನಿಗಳಲಿ ತಂಪೇರುವ ಆಸೆ...
  ಆಸೆ ತುಂಬಿದ ನಿನ್ನ ಕಂಗಳ ಕಾಂತಿಯಲಿ ನಾ ಬೆರೆಯುವ ಆಸೆ...
  ©kavyarsmiley