• dhanushshetty 5w

    ಕ್ರಮೇಣ ತಂತ್ರಜ್ಞಾನದಲ್ಲಿ ಅಭಿವೃದ್ಧಿಗೊಂಡಂತೆ ಸಂಬಂಧಗಳಲ್ಲಿ ಬಿರುಕು ಕಾಣಿಸುತ್ತಿದೆ.
    ಜಂಗಮವಾಣಿಯಲ್ಲಿ ನಾವು ವ್ಯವಹರಿಸುವ ಸಾಮಾಜಿಕ ಜಾಲತಾಣಗಳ ಬಳಕೆಯ ದಯದಿಂದ ಮಾತುಗಳು ಕಡಿಮೆ ಆಗುತ್ತಿದೆ..
    ಎಷ್ಟರಮಟ್ಟಿಗೆ ಅದರ ಪ್ರಭಾವ ಬೀರಿದೆಯೆಂದರೆ ಹಿಂದೆಲ್ಲ ಕುಟುಂಬದ ಸದಸ್ಯರೆಲ್ಲ ಒಂದಾಗಿ ಕೂಡುವರು ಇಂದಿಗೆ ಅಭಿವೃದ್ಧಿಗೊಂಡ ಸಮಾಜದ ಹೆಸರಿನಲ್ಲಿ ಒಬ್ಬೊಬ್ಬರು ತಮ್ಮದೇ ಆದ ಲೋಕದಲ್ಲಿ ತೊಡಗಿಕೊಂಡಿದ್ದಾರೆ..
    ಇದು ಹೀಗೆ ಮುಂದುವರಿದರೆ ನಮ್ಮ ಸಮಾಜದಲ್ಲಿ ಸಂಘಜೀವಿ ಮನುಷ್ಯ ಕಾಣಲಿಕ್ಕೆ ಸಿಗಲಿಲ್ಲ ಮನುಷ್ಯರೂಪದ ಯಂತ್ರದ ಆಲೋಚನೆ ಹೊಂದಿದ ಹೊಸ ಪ್ರಭೇದ ಕಾಣಸಿಗುವುದು..
    ಇದರ ಅಟ್ಟಹಾಸ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಮನುಷ್ಯರು ಹೇಗೆಲ್ಲ ಜೀವಿಸುತ್ತಿದ್ದರು ಎಂದು ಇತಿಹಾಸ ಪಾಠ ಮಾಡಬೇಕಾಗುವುದು...
    D.S
    ©dhanushshetty