• havyasi_lekhaki 23w

    ಸಂಜೆ

    ಆವತ್ತು ಸಂಜೆ ಎಲ್ಲವೂ ನಿಶ್ಯಬ್ದವಾಗಿತ್ತು. ಗೋಡೆಯ ಮೇಲಿರುವ ಗಡಿಯಾರದ ಸದ್ದು ಸಹ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಾವಿಬ್ಬರೂ ಜೊತೆ ಇದ್ದರೂ, ಇಲ್ಲದಂತಿದ್ದೆವು. ಮಾತಾಡುವುದಕ್ಕೆ ಏನು ಉಳಿದಿರಲಿಲ್ಲ, ನಮ್ಮ ಮೌನವೇ ಮಾತಾಗಿತ್ತು. ನಮ್ಮ ಕಾಫಿಯ cup ಸಹ ವಣಗಿತ್ತು. ತುಂಬ ಹೊತ್ತಿನ ಮೌನದ ನಂತರ ನಾನು ಆ ಮೌನ ಮುರಿದು ಹೇಳಿದೆ, ಸರಿ ನಾನಿನ್ನು ಹೊರಡುತ್ತೇನೆ, ತುಂಬಾ ಹೊತ್ತಾಯಿತು. ಅವನು ಏನೊ ಹೇಳ್ಬೇಕು ಅಂತ ಕನವರಿಸಿದ ಆದರೆ ಹೇಳಲಿಲ್ಲ ಸರಿ ಎಂದು ಸುಮ್ಮನಾದ.
    ನಾನು ಹೊರಡಲು ಎದ್ದು ನಿಂತೆ. ಹೊರಡುವ ಮುನ್ನ ಕೊನೆಯ ಬಾರಿ ಅವನನ್ನು ನೋಡಿದಾಗ, ಎಲ್ಲವನ್ನು ಮರೆತು ಅವನನ್ನು ಗಟ್ಟಿಯಾಗಿ ಅಪ್ಪಿಕೊಳ್ಳಬೇಕು, ಒಂದು tight ಆಗಿ kiss ಕೊಡಬೇಕು, ಈ ಜಗತ್ತಿನಲ್ಲಿ ನಿನ್ನಷ್ಟು important ಯಾರು ಇಲ್ಲ, ನನಗೆ ಇಲ್ಲಿಂದ ಹೋಗೊ ಮನಸ್ಸಿಲ್ಲ ಅಂತೆಲ್ಲಾ ಹೇಳಬೇಕು ಅಂತ ಅನ್ನಿಸ್ತು. ಆದರೆ ಸುಮ್ಮನಾದೆ ಏನು ಹೇಳಲಿಲ್ಲ. ಅಲ್ಲಿಂದ ಹೊರಟು ಬಂದೆ.
    ©havyasi_lekhaki