• shree_07 23w

    ದಿನನಿತ್ಯದ ಗೋಳು
    ಅರಿತು ಅರಿಯದ ಬಾಳು
    ಮುಂಜಾನೆಯಿಂದ ಮುಸ್ಸಂಜೆ ತನಕ ಬೆವರರಿಸಿ ಮಲಗಿದರೂ ನಿದ್ದೆ ಬಾರದ ರಾತ್ರಿಗಳು!!

    ಹೇಳುವವರು ಯಾರಿಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಗಳು
    ಕೇಳುವವರು ಯಾರಿಲ್ಲಿ ನಮ್ಮ ವ್ಯಥೆಯ ಕತೆಗಳು!!

    ಹಲವಾರು ಕನಸುಗಳು ಕಂಬನಿಯ ಹನಿಯಲ್ಲಿ
    ನನಸಾಗದ ಆಸೆಗಳು ನಗುವಿನ ಅಂಚಲ್ಲಿ!!

    ಮುಂದಿನ ಜೀವನಕ್ಕೆ ದಾರಿ ಹುಡುಕುವುದೋ ತೀರದ ನೋವಿಗೆ ಇರುವ ದಾರಿ ಬಿಟ್ಟು ಹೋಗುವುದೋ ತಿಳಿಯದಾಯಿತು ಈ ನಮ್ಮ ದಿನನಿತ್ಯದ ಗೊಳಿನಲ್ಲಿ!!