Grid View
List View
 • pratimamoha 1d

  ನಾವೂ ನೀವೂ ...ಎಲ್ಲರೂ...
  ___________

  ಹಿಂದಿ ಗುಲಾಮಗಿರಿಯಲ್ಲಿ ನಾವೂ ನೀವೂ ಅವರೂ ಇವರೂ ಎಲ್ಲರೂ ದೊಡ್ರಂಗೇಗೌಡರ ಹಂಗೇಯ

  ದಡ್ಡ ಗೌಡರು ಮಾತ್ರ ಆಡಬಾರದ ಸಮಯದಲ್ಲಿ ಆಡಿ
  ಸಿಕ್ಕಿಕೊಂಡುಬಿಟ್ಟರು ಅಷ್ಟೇಯ ..

  ಐದನೆ ಕ್ೞಾಸಿಂದ ಹತ್ತತ್ರ ಡಿಗ್ರಿ ತನಕ ಮೂರೂಮುಚ್ಚಿಕೊಂಡು ಕಲಿತೀವಿ ಹಿಂದೀಯ

  ನಮ್ಮ ಹಂಗೇ ಕಲಿತ ರೋಗಿಯೊಬ್ಬ 'ಹಿಂದಿ ಬಂಬಾಟ್ ' ಅಂದಾಗ ಹುಚ್ಚರಂತಾಡುತ್ತೀವಲ್ರಯ್ಯ

  ಹಿಂದಿ ಕಲಿಯುವುದಿಲ್ಲವೆಂದು ಪಠ್ಯದಿಂದ ಕಿತ್ತು ಬಿಸಾಕಲು ಹೋರಾಟಕ್ಕೆ ಕುಂತಾಗ ಮಾತ್ರ ನಾವ್ ವೀರ‌ಕನ್ನಡಿಗರಯ್ಯಾ

  ಅಲ್ಲೀವರೆಗೆ 'ವೀರ ' ಸಾವರ್ಕರರು ನಾವಷ್ಟೇಯ ಮತ್ತೇನೂ ಅಲ್ಲ ಕಣ್ರಯ್ಯ

  _________
  ಕೆ ಪಿ ನಟರಾಜ
  25. 1. 2021
  ©pratimamoha

 • pratimamoha 1d

  ಗಣ ರಾಜ್ಯ ಗೀತ - ೨೦೨೧
  ____

  ಜನ , ರಾಜ ಗಣದ ರಾಜ್ಯ ನಾಶನಮಾಡಿದ
  ದಿನ

  ಜನ , ಸಾಮ್ರಾಜ್ಯ ಗಣದ ರಾಜ್ಯ ನಾಶನವಾದ
  ದಿನ

  ಜನ , ನಾವು ನಮ್ಮನ್ನಾಳುವ ಶಾಸನ
  ಮಾಡಿಕೊಂಡ ದಿನ

  ಗಂಡು ಹೆಣ್ಣು ಬ್ರಾಹ್ಮಣ ಅಸ್ಪೃಶ್ಯಾದಿ
  ಭೇದ ತೊಡೆವ ಪಣ ತೊಟ್ಟ ದಿನ

  ನಾವು ಕಂಡ ಕನಸಿನ ಸಂವಿಧಾನವನು
  ಒಪ್ಪಿದದಿನ

  ಇನ್ನು ಸಂವಿದಾನವೇ ಧರ್ಮ ವೆಂದು ತಿಳಿವ
  ದಿನ

  ನಿತ್ಯವೂ ಸಂವಿದಾನದ ದಿನ ಎಂದು ತಿಳಿವ
  ದಿನ

  ಗಾಂಧಿ ಅಂಬೇಡ್ಕರ್ ಲೋಹಿಯಾ ನೆಹರೂ
  ಎಂದು ನೆನೆವ ದಿನ

  ಸಾಮಾನ್ಯರು ಅಸಾನಾನ್ಯರಾಗಲು ಕನಸುವ
  ದಿನ

  ನಾನು ಅನ್ಯ ಚರಾಚರಾದಿ ಭೇದ ತೊಡೆವ
  ಪಣ ತೊಡುವ ದಿನ

  ಈ ದಿನ ಮಹತ್ವದ ದಿನವೆಂದರಿಯುವ
  ದಿನ ಮಹಾ ದಿನ

  ಜಾತಿ ಮತ ಲಿಂಗ ಭೇದಾದಿ ಆದಿ
  ಕೊಳಕು ಬಟ್ಟೆಗಳ ಕಿತ್ತೆಸೆವ ದಿನ

  ಇದು ಗಣ ರಾಜ್ಯ ದಿ‌ನ , ಜನ ರಾಜ್ಯ ದಿನ
  ಜನ ಸಾಮಾನ್ಯನ ದಿನ

  ಬನ್ನಿ ಮಾಡಬೇಕೇನೆಂದು ಚಡಪಡಿಸೋಣ
  ಕಣ್ಣೀರಿಡೋಣ ನಮ್ಮ ಕೇಡಿಗೆ ಈ ದಿನ

  _______
  ಡಾ ಕೆ ಪಿ ನಟರಾಜ
  26. 1. 2021
  ©pratimamoha

 • pratimamoha 1w

  ಶಿವನೆಂದರ್ಯಾರೋ !
  _____

  ಶಿವನೆಂದರ್ಯಾರೋ,
  ಗೊತ್ತಾಗುತ್ತಿಲ್ಲ ಈ ಮಹಾ ರಾತ್ರಿ ತತ್ವವವನೋ!?

  ಶಿವನೆಂದರ್ಯಾರೋ
  ಗೋಚರಿಸುತ್ತಿಲ್ಲ ಅನಂತ ಅಂತರಿಕ್ಷವವನೋ!?

  ಶಿವನೆಂದರ್ಯಾರೋ
  ಅರಿವಾಗುತ್ತಿಲ್ಲ , ನನ್ನೊಳಗಿನ ಸಾಧಾರಣತ್ವವವನೋ!?

  ಶಿವನೆಂದರ್ಯಾರೋ ,
  ಆಕಾಶದಿಂದತ್ತತ್ತ ಪಾತಾಳದಿಂದಿತ್ತಿತ್ತ ವೆಂದರೋ ಅವನ

  ಶಿವನೆಂದರ್ಯಾರೋ,
  ಜಗದಗಲ ಮುಗಿಲಗಲ ಮಿಗೆಯಗಲವವನೋ

  ಶಿವನೆಂದರ್ಯಾರೋ ,
  ಸಸ್ಯಾದಿಯಲ್ಲಿ ಸುಳಿವ ಗಾಳಿ ಸ್ಥಿರಾನ್ನರಸ ತತ್ವ ಅವನೋ!?

  ಶಿವನೆಂದರ್ಯಾರೋ ,
  ಮೃಗಾದಿಯಲ್ಲಿ ಮೊರೆವ ಹಸಿವು ಮೈಥುನಾದಿ ಅವನೋ

  ಶಿವನೆಂದರ್ಯಾರೋ
  ತಿಳಿವೊಡರುತ್ತಿಲ್ಲ ಜನ್ಮ ಮೃತ್ಯು ಸುಖ ದುಹ್ಕವವನೋ !?

  ಶಿವನೆಂದರ್ಯಾರೋ
  ಕಣ್ಗಾಣುತ್ತಿಲ್ಲ ಈ ಅರಿವು ಗುರುಡು ಅವನೋ!?

  ಶಿವನೆಂದರ್ಯಾರೋ
  ಅನ್ಯರರ್ಥವೇನೋ , ನನ್ನರವಿಗೆಟಕುತ್ತಿಲ್ಲ ಅವನೋ...

  ಶಿವನೆಂದರ್ಯಾರೋ,
  ಅನಂತ ಚಡಪಡಿಕೆಯೊಂದೆ , ನನಗೆ ಕಾಣಲಾರನೇನೋ!

  ಶಿವನೆಂದರ್ಯಾರೋ ,
  ಸುತ್ತುವರಿದಿರುವನವನೊ!? ಈ ಪಂಚ ಭೂತಗಳವನೋ!?

  ಶಿವನೆಂದರ್ಯಾರೋ,
  ಫಲ ಪುಷ್ಪ ಬೀಜ ವೃಕ್ಷ ತತ್ವವಾಗಿ ಹುದುಗಿರುವವನೋ

  ಶಿವನೆಂದರ್ಯಾರೋ ,
  ಕಂಡವರ ಕಾಣ್ಕೆ ಕಾಣದೊ ,ಗುಹೇಶ್ವರ ಲಿಂಗ , ಕೂಡಲಸಂಗಮ ದೇವಾ

  ಶಿವನೆಂದರ್ಯಾರೋ ,
  ಕಂಡರಿಸಿದವರ ಮಾಟ ಮೂಡದೋ : ಚನ್ನ ಮಲ್ಲಿಕಾರ್ಜುನಾ

  ಶಿವನೆಂದರ್ಯಾರೋ ,
  ಅಂದವರಿಯುತ್ತಿಲ್ಲ , ದೇಹ ವೆಂಬ ನಾನು ಅವನೋ

  ಶಿವನೆಂದರ್ಯಾರೋ ,
  ಈ ದೇಹ ನಿರ್ದೇಹವಾದರೂ ಅಲ್ಲಿ ಇರುವವನೋ

  ಶಿವನೆಂದರ್ಯಾರೋ ,
  ಗೊತ್ತಾಗದಲ್ಲ , ಹಿಡಿಯಬೇಕು ಇನ್ನೂ ಅವನನ್ನೋ..

  _________
  ಕೆ ಪಿ ನಟರಾಜ
  17. 1. 2021
  ©pratimamoha

 • pratimamoha 1w

  ಜನ ...
  ______

  ೧.
  ಜಾಣ ಜನ ಎದುರಿರುವವನ ಕೇಳಿಸಿಕೊಳ್ಳದೆ ದೊಡ್ಡ ಗಂಟಲ ಮೆಟ್ಟುಗಾಲಲಿ ಮೆಟ್ಟಿ ಪಿಸು ದನಿಯ ಕೊಲ್ಲುವ ಜನ

  ಜಾತಿ ಮತ ಧರ್ಮಗಳಿಗೆ ಖಾಯಮ್ಮಾಗಿ ಮಾರಿಕೊಂಡ ಲಡ ಲಡಾ ಅಲ್ಲಾಡುವ ನಾಲಗೆಯ ಜನ

  ನಿನ್ನ ಕಷ್ಟ ಸುಖಗಳಲಿ ‌ನಯವಾಗಿ , ಕ್ರೂರವಾಗಿ , ನಸುಗುನ್ನಿಯಂತೆ , ಗೊತ್ತೇ ಇಲ್ಲದವರಂತೆ ತಪ್ಪಿಸಿಕೊಳ್ಳುವ ಜನ

  ೨.

  ಆಯಾ ಇಸಮುಗಳು ಒಪ್ಪುವಂತೆ ತಕ್ಕನಾಗಿ ಬರೆದು ಆಡಿ ಎಂಜಲು ತಿನ್ನುವ ನ್ಯಾರ ನೋಟವಿಲ್ಲದ ತಜ್ನ ನಾಮಕ ಜನ

  ತಮ್ಮ ಕೆಲಸವಾಗುವಲ್ಲಿ ಮಾತ್ರ ಸ್ನೇಹದ ಮಳೆಗರೆವ ಮುಗುಳು ನಗು ತುಳುಕಿಸುವ ಸಮಯಸಾಧಕ ಜನ

  ರೂಢಿ ಜಾಡಿಗೆ ಬಿದ್ದವರ ತೆಗಳದ ಜನ ಟೀಕಿಸದ ಜನ ರೇಗದ ಜನ ಜನರನೇ ಬಂಡವಾಳ ಮಾಡಿಕೊಂಡ ಜನ

  ೨.
  ಜನವ ಮಹಾಜನವ ಲೆಕ್ಕ ಕೇಳಲು ಎಳೆ ತರದಿದ್ದರೆ ಕಟಕಟೆಗೆ ಜನ ಆಡಿದ್ದೇ ಆಟ ಆಡುವುದು ಹೂಡಿದ್ದೇ ಲಗ್ಗೆ ಹೂಡುವುದು

  ಜನತಾ ಜನಾರ್ದನ ಆಹಾ ಮಲಿನ ಕೂಡಲ ಸಂಗಮದೇವಾ ಶ್ರೀ ಸಾಮಾನ್ಯಾ ಪ್ರಜಾಪ್ರಭು

  ನಿನ್ನ ನಾಯಕ ಮಣಿಯಂತೆ ಎಲ್ಲವನೂ ಕಳಚಿ ನಿಲ್ಲುವ ಜಾಣ ಎಲ್ಲಯ್ಯ ನೀ ನಡೆದ ಆದಿ ಕುಶಲ ಹಾದಿ ನಿನ್ನ ಯೊಗ ಆದಿ ಯೋಗ?!

  ________
  ಡಾ ಕೆ ಪಿ ನಟರಾಜ
  17. 1. 2021
  ©pratimamoha

 • pratimamoha 2w

  ಅಲೆವ ಮೃಗ
  _______

  ಮನದಲ್ಲಿ ನಿನ್ನ ನೆನಹು ಹೊತ್ತು
  ಹಗಲು ರಾತ್ರಿಗಳ ಬಯಲಲ್ಲಿ
  ಆಯಸ್ಸು ತೀರದ ಮೃಗದಂತೆ ಅಲೆಯುತಿದ್ದೇನೆ

  _______
  ಡಾ ಕೆ ಪಿ ನಟರಾಜ
  ©pratimamoha

 • pratimamoha 2w

  ಅಣ್ಣನ (ಕುವೆಂಪು ಅವರ ) ಕನ್ನಡದ ಬಗೆಗಿನ ಕಾಳಜಿ ಮತ್ತು ಜಾತಿ ಧರ್ಮಗಳ ಬಗ್ಗೆ ಸಿಟ್ಟು ಇವೆಲ್ಲದರ‌ ಅಂತಸ್ಸತ್ವ ಒಂದೇ ಮೂಲದಿಂದ ಉದ್ಭವಿಸಿದ್ದು ಎಂದು ಹೇಳಬಹುದು

  • ಪೂರ್ಣ ಚಂದ್ರ ತೇಜಸ್ವಿ

  ©pratimamoha

 • pratimamoha 3w

  ನಾಗರಿಕತೆಯ ಕುರೂಪಗಳೆಂದರೆ :
  ___________________________

  ೧.
  ಎರಡು , ಮೂರು ನಾಲ್ಕು ಚಕ್ರಗಳ ಮೇಲೆ ಓಡುವ ವಾಹನಗಳೊಳಗೆ ಕುಂತು ಮೊರೆಯುತ್ತಿರುವ ಮಹಾ ನಗರಗಳೆಂಬ ಜನಾರಣ್ಯಗಳು

  ೨.
  ಜಾತಿಗಳೊಳಗೆ ಸಿಕ್ಕಿಕೊಂಡು ನಗರೀಕರಣದ ಇಕ್ಕಳಕ್ಕೆ ಸಿಕ್ಕಿ ನಲುಗುತ್ತ ಎಲ್ಲವನ್ನೂ ಕಳೆದುಕೊಂಡ ಅನ್ನ ನೀರು ನೆಲೆಗಳಿಲ್ಲದ ಏಕಾಂತ ವಾಸದ ಹಳ್ಳಿಗಳು

  ಡಾ ಕೆ ಪಿ ನಟರಾಜ
  ೦೩. ೦೧. ೨೦೨೦
  ©pratimamoha

 • pratimamoha 4w

  *ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ಚಿತ್ರದುರ್ಗ*

  2) *ಜಗದ್ಗುರು ಡಾ.ಶ್ರೀಶಾಂತವೀರ ಮಹಾಸ್ವಾಮೀಜಿ ಶ್ರೀ ಜಗದ್ಗುರು ಕುಂಚಿಟಿಗ ಮಾಹಸಂಸ್ಥಾನ ಮಠ ಹೊಸದುರ್ಗ*

  3) *ಜಗದ್ಗುರು ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ* ಭಗಿರಥ ಪೀಠ ಮದುರೆ

  4) *ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ ಯಾದವ ಮಹಾಸಂಸ್ಥಾನ ಚಿತ್ರದುರ್ಗ*

  5) *ಜಗದ್ಗುರು ಶ್ರೀ ಅನ್ನದಾನಿ ಅಪ್ಪಣ್ಣ ಮಹಾಸ್ವಾಮೀಜಿ*
  ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ

  6) *ಜಗದ್ಗುರು ಶ್ರೀ ಮಾಚಿದೇವ ಮಹಾಸ್ವಾಮೀಜಿ* ಮಡಿವಾಳ ಗುರುಪೀಠ ಚಿತ್ರದುರ್ಗ

  7) *ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ* ಶ್ರೀಗುರು ನಾರಾಯಣ ಮಹಾಸಂಸ್ಥಾನ ಅಮೃತ(ಹುಂಚ) ಗ್ರಾಮ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

  8) *ಜಗದ್ಗುರು ಶ್ರೀ ನಾಗಿದೇವ ಮಹಾಸ್ವಾಮೀಜಿ* ಛಲವಾದಿ ಗುರುಪೀಠ ಚಿತ್ರದುರ್ಗ

  9) *ಜಗದ್ಗುರು ಶ್ರೀ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ* ಕುಂಬಾರ ಗುರುಪೀಠ, ತೆಲಸಂಗ, ಅಥಣಿ ತಾಲ್ಲೂಕು ಬೆಳಗಾವಿ ಜಿಲ್ಲೆ

  10) *ಪಪೂ ಶ್ರೀ ಬಸವ ಹರಳಯ್ಯ ಸ್ವಾಮೀಜಿ*
  ಹರಳಯ್ಯ ಗುರುಪೀಠ ಐಮಂಗಲ ಚಿತ್ರದುರ್ಗ

  11) *ಪಪೂ ಶ್ರೀ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ*
  ಮೇದಾರ ಗುರುಪೀಠ ಚಿತ್ರದುರ್ಗ

  12) *ಶ್ರೀ ಸೇವಾಲಾಲ್ ಮಹಾಸ್ವಾಮೀಜಿ* ಲಂಬಾಣಿ ಗುರುಪೀಠ ಚಿತ್ರದುರ್ಗ

  13) *ಶ್ರೀ ಮಹಾಲಿಂಗ ಮಹಾಸ್ವಾಮೀಜಿ* ಕಾಶಿ ಅನ್ನಪೂರ್ಣ ಮಠ ತಂಗನಹಳ್ಳಿ ತುಮಕೂರು ಜಿಲ್ಲೆ

  14) *ಶ್ರೀ ತಿಪ್ಪೇರುದ್ರ ಮಹಾಸ್ವಾಮೀಜಿ* ಕಲ್ಕೆರೆ ತುರುವೇಕೆರೆ ತಾಲ್ಲೂಕು

  *ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಬಸವರಾಜ್. ಕುಬೇರಪ್ಪ ಪ್ರಭಂಜನ್. ಓಂಕಾರಣ್ಣ. ಇತರರು ಭಾಗವಹಿಸಿದ್ದರು*

 • pratimamoha 4w

  ಅವನು
  ಅನ್ಯಾಯವನ್ನು ಕಂಡರೆ ಬೆಂಕಿಯಂತೆ ಉರಿಯುತ್ತಿದ್ದ
  ಹೀಗಿರುವಾಗ
  ಅವನಿಗೂ ಕಾಯಿಲೆಯೋ ವಯಸ್ಸೋ ಆಗುತ್ತದಲ್ಲ ...

  ಸತ್ತ


  ಅಂತ

  ಸುದ್ದಿ ಬಂತು

  ಜನ
  ಈ ಸುದ್ದಿಯನ್ನು ತಮ್ಮ ಯೋಗ್ಯತೆಗಳಿಗೆ ತಕ್ಕಂತೆ 'ಅರ್ಥಪೂರ್ಣ' ವಾಗಿ
  ಪರಾಂಬರಿಸಿದರು
  ಅಂದರೆ
  ಆಡಿಕೊಂಡರು

  ದೇವರು
  ಎಂದಿನಂತೆ
  ಎರಡನ್ನೂ ಮುಚ್ಚಿಕೊಂಡು ಸುಮ್ಮನಿದ್ದ

  _________
  ಡಾ ಕೆ ಪಿ ನಟರಾಜ
  31. 12. 2020
  ©pratimamoha

 • pratimamoha 4w

  ಬಲು ನೊಂದೆನಲ್ಲ, ನೋಯಿಸಿದೆನಲ್ಲ...
  ___________

  ಕಟ್ಟಿದ ಗಂಟು ಕೂಡಿಟ್ಟ ಆಸ್ತಿ
  ಕಟ್ಟಕಡೆಗೆ ಬಿಟ್ಟು ಹೊರಡಬೇಕು

  ಎಂಬ ವಿಧಿಯ ಪಟ್ಟು
  ಬಿಡದೆ ಹಿಡಿದಿದ್ದರೂ

  ಇಲ್ಲೇ ಗೂಟ ಹೊಡೆಯುವ ನನ್ನ ಪಟ್ಟ ಭದ್ರ
  ರೋಗ ಬಿಟ್ಟುಹೋಗದಲ್ಲ

  ಚಟ್ಟದ ಮೇಲೆ ಪಟ್ಟಾಗಿ
  ಕಟ್ಟಿಹಾಕುವುದ ತಪ್ಪಿಸಲಾಗದು

  ಗುಂಡಿಯಲಿ ಮಲಗಿಸಿ ಮಣ್ಣಜ ಮುಚ್ಚಿ
  ಬೆಂಕಿಯಲಿ ಸುಟ್ಟು ಸೀಯುವ

  ವಿಧಿಯ ಕಟು ಸತ್ಯ
  ಬೂದಿ ಮುಚ್ಚಿದ ಕೆಂಡದಂತೆ

  ಕಾಷ್ಟದೊಳಗಿನ
  ಅಗ್ನಿಯಂತೆ ಅವಿತಿದ್ದರೂ

  ಮನುಷ್ಯ , ನಿನ್ನ
  ಗಳಿಸುವ ಕೂಡಿಡುವ ಬಚ್ಚಿಡುವ

  ಅವರಿವರದನೂ
  ಬಳಿದು ಬಾಚಿಕೊಳ್ಳುವ

  ಜಿದ್ದು , ಈ ಹಾಳು ಬಾಳ ಕಾಲ್ದಸಿಯ
  ಜೀತ ತಪ್ಪದಲ್ಲ

  ಪ್ರಳಯಕ್ಕೆ ಕಾದಿರುವ
  ಮೂರ್ತಿ ನಾನೆಂಬ ಅರಿವು

  ಕಣ್ಣಾಗಿ ಕಾಣದೇ ,ಕೈಹಿಡಿದು ನಡೆಸದೇ
  ಕೈ ಬಿಟ್ಟುಹೋಯಿತಲ್ಲ

  ಸುಳ್ಳಿನಲಿ ಲೋಭದಲಿ
  ಮತ್ಸರದ ಬೆಂಕಿಯಲ್ಲೇ

  ನಿತ್ಯ ಬೆಂದೆನಲ್ಲ‌
  ಬೆಂದು ವ್ಯಾಧಿ ಬಾಧಿತನಾದೆನಲ್ಲ

  ತಳವೂರುವ ತಳಮಳದಲ್ಲೆ
  ತಳವೊಡೆದುಹೋದೆನಲ್ಲ

  ಬರೆ ಮೂರು ದಿನದ
  ಬಾಳಿಗಾಗಿ ಬಲು ನೊಂದೆನಲ್ಲ ,ನೋಯಿಸಿದೆನಲ್ಲ

  ________
  ಡಾ ಕೆ ಪಿ ನಟರಾಜ
  30. 12. 2020
  ©pratimamoha